ಮೋದ ಮೊದಲು |
ನಿನ್ನ ನೊಡಲು ಏರಡು ಕಣ್ಣು ಸಾಲದಾಗಿವೆ ಮಗನೆ ಅಷ್ಟೋಂದು ಅದ್ಬುತವಾಗಿರುವೆ, ನನ್ನ ಬಳಿಯಿದ್ದ Samsung Mobile Galaxy DOUS Hand set ನ್ನು ಮಾರಿ ನಿನಗೆ ಕೊರಳ ಚೈನ್ (19000/- ಮೌಲ್ಯದ್ದು) ಮಾಡಿಸಿದೆ. ಈಗ ನಿನ್ನ ಫೋಟೋಗಳನ್ನು ನಿನ್ನಮ್ಮನ ಮೋಬೈಲ್ ನಲ್ಲೇ ತಗೆಯುತ್ತಿರುತ್ತಾಳೆ ಅವುಗಳು ಅಷ್ಟೋಂದು ಕ್ಲೀಯರ್ ಬರುವುದಿಲ್ಲ ಆದರೂ ಪ್ರತ್ನಿಸಿದ್ದೇನೆ ನಿನ್ನ ಫೊಟೋಗಳನ್ನು ಇಲ್ಲಿ ಅಪ್ ಲೋಡ್ ಮಾಡಲು.
ನಿನಗೆ ನೀನೆ ಸಾಟಿ ಕಣೋ ಮಗ |
ನಿನ್ನ " ನಾಮಕರಣ " ವನ್ನು ದಾವಣಗೆರೆಯ ವಿನೋಭನಗರದ 2ನೇ ಮುಖ್ಯರಸ್ತೆ, 4ನೇ ಅಡ್ಡ ರಸ್ತೆಯಲ್ಲಿರುವ ನಮ್ಮ ಬಾಡಿಗೆ ಮನೆ ಸಂಖ್ಯೆ 1063 ರಲ್ಲಿ ನೆಡೆಸಲು ನಿರ್ಧಾರ ಮಾಡಿದೆ. ಕಾರಣವಿಷ್ಟೇ ದಾವಣಗೆರೆಯಲ್ಲಿ ಯಾವ ಮಿನಿ ಛತ್ರವೂ ಅಂದು ಬಿಡುವು ಇರದಿದ್ದ ಕಾರಣ.
ನೋಡೋದಿಕ್ಕೆ ಎಷ್ಟು ಆನಂದ |
ದಿನಾಂಕ 14-01-2014ರ ಮಂಗಳವಾರ ಸಂಜೆ ವಿನೋಭನಗರದ 3ನೇ ಮುಖ್ಯ ರಸ್ತೆ, 9ನೇ ಕ್ರಾಸ್ ನಲ್ಲಿರುವ " ಶ್ರೀ ಆಂಜನೇಯ ದೇವಸ್ತಾನ " ದ ಪ್ರಧಾನ ಅರ್ಚಕರಾದ " ಶ್ರೀ ಮಾರುತಿ " ಯವರನ್ನ ಬೇಟಿಯಾಗಿ ನಿನ್ನಮ್ಮನ ಆಸೆಯಂತೆ
ನೀ ನಕ್ಕರೆ ಜೇನು ಸಕ್ಕರೆ |
ಮತ್ತು ಅಂದು ನಾಮಕರಣ ಕಾರ್ಯಕ್ರಮಕ್ಕೆ ಶುಭ ದಿನವಾದ್ದರಿಂದ ದಿನಾಂಕ 2-02-2014 ರ ಭಾನುವಾರದ ಮುಂಜಾನೆಯೇ " ಶ್ರೀ ಸತ್ಯನಾರಾಯಣ ಸ್ವಾಮಿ " ಯ ಪೂಜೆ ಮಾಡಿಸಿ ನಂತರ ನಿನಗೆ ಅಜ್ಜಂದಿರು, ಅಜ್ಜಿಯಂದಿರು, ಅತ್ತೆಯಂದಿರು, ಮಾವಂದಿರು, ದೊಡ್ಡಪ್ಪಂದಿರು, ದೊಡ್ಡಮ್ಮಂದಿರು, ಚಿಕ್ಕಪ್ಪಂದಿರು, ಚಿಕ್ಕಮ್ಮಂದಿರು, ಹಾಗೂ ನಿನ್ನ ಸಹೋದರ, ಸಹೋದರಿಯರು, ಮತ್ತು ಪ್ರಮುಖ ಆಹ್ವಾನಿತರೊಂದಿಗೆ ಹಾಗೂ ಬಂದತಹ ಬಂಧು ಬಾಂಧವರೊಂದಿಗೆ ಸಂತೋಷದಿಂದ ಸೇರಿ ಅವರೆಲ್ಲರ ಸಮ್ಮುಖದಲ್ಲಿ ನಿನಗೆ " ನಾಮಕರಣ ಶಾಸ್ತ್ರ " ಮಾಡಿ ಊಟದ ಏರ್ಪಾಡು ಮಾಡಿಸುವುದು ನಿನ್ನಮ್ಮನ ಚಿಂತನೆ.
![]() |
ಬಾವುಗ ಅಂತ ನಿಮ್ಮ ಮಮ್ಮಿ ಕರೀತಾ ಇದ್ರು ಕಣೋ |
ಈ ವಿಚಾರವನ್ನ ಅರ್ಚಕರ ಬಳಿ ನಿವೇದಿಸಿಕೊಂಡೆ ಅವರು ಸಹ ತುಂಬು ಹೃದಯದಿಂದ ಒಪ್ಪಿದ್ದಲ್ಲದೇ ಮತ್ತು ಬೆಳಿಗ್ಗೆ 6.30 ರಳೊಗೆ ಪೂಜೆ ಪ್ರಾರಂಭವಾಗುವಂತೆ ನೀವೆಲ್ಲಾ ಸಿದ್ದರಾದರೆ ನಾನು ಬಂದು ಸತ್ಯನಾರಯಣ ಸ್ವಾಮಿಯ ಪೂಜೆಯನ್ನು ಶ್ಯಾಸ್ತ್ರೋತ್ರವಾಗಿ ನೆರವೇರಿಸಿಕೊಡಲು ಸಿದ್ದರೆಂದರು ಮತ್ತು ಪೂಜೆಗೆ ಬೇಕಾಗುವ ಸಾಮಾಗ್ರಿಗಳ ವಿವರ ಬರೆದು ಕೊಟ್ಟರು.
ಈ ವಿಷಯವನ್ನ ಹೇಳಲು ನಾನು ದಿನಾಂಕ 15-01-2014 ರಂದು ಮಧ್ಯಾಹ್ನ ಊಟಕ್ಕೆಂದು ಹೊನ್ನಾಳಿಗೆ ಬಂದಾಗ ನಿನ್ನಮ್ಮ ಮತ್ತು ಅಜ್ಜಿ ನಿರ್ಮಲರಿಗೆ ನಾನು ತೆಗೆದುಕೊಂಡ ನೆರ್ಧಾರದ ಬಗ್ಗೆ ವಿವರವಾಗಿ ಹೇಳಿ ಮುಂದಿನ ಕಾರ್ಯಕ್ರಮದ ಬಗ್ಗೆ ಯೋಚಿಸಿರೆಂದು ಹೇಳಿದೆ.
0 comments:
Post a Comment
Thank you so much