ನಿನ್ನ ತಾಯಿಯ ಗರ್ಭದಲ್ಲಿದ್ದಾಗಲೇ ಕರ್ಣ ನೆಂದು ಹೆಸರಿಟ್ಟಿದ್ದೆ |
ನೀನು ಹುಟ್ಟಿದ ದಿನದಂದೇ ನಾವು ಸಾಗರದಲ್ಲಿ ಬ್ರಾಹ್ಮಣರನ್ನು ಕೇಳಿಸಿ ನಿನ್ನ ಜನ್ಮ ನಾಮ ನಿ, ನು ,ನೆ ಎಂಬ ಹೆಸರಿನಕ್ಷರದಲ್ಲಿಡಬೇಕೆಂದು ಸೂಚಿಸಿದ್ದರು. ನಾನು ಮಾತ್ರ ನೀನು ಇನ್ನೂ ಹುಟ್ಟಿಯೇ ಇರಲಿಲ್ಲ ಸುಮಾರು ಐದು ವರ್ಷಗಳ ಹಿಂದೆಯೇ ನಿರ್ಧರಿಸಿಬಿಟ್ಟಿದ್ದೆ ನಿನಗೆ ’ ಕರ್ಣ ’ ನೆಂದು ಹೆಸರಿಡಬೇಕೆಂದು. ಮತ್ತೂ ಅದೇ ರೀತಿಯಾಗಿ ನೀನಿನ್ನೂ ಅಮ್ಮನ
ಹೊಟ್ಟೆಯಲ್ಲಿದ್ದಾಗಲೇ ಕರ್ಣನೆಂದು ಕರೆಯುತ್ತಾ ಬಂದಿದ್ದೆ.
ನೋಡು ಮಗ ನಿನ್ನ ವಿಡಿಯೋ |
ನಾನು ಜೀವನದಲ್ಲಿ ಅನುಭವಿಸಿದ ರೌರವ ಯಾತನೆಗಳು, ಅವಮಾನಗಳು, ಅಪಮಾನಗಳು ನನ್ನ ಜೀವನಕ್ಕೆ ಸಾಕು. ಮುಂದುವರೆಯುವುದು ನನಗಿಷ್ಟವಿಲ್ಲ. ಹೀಗಾಗಿಯೇ ನಾನು ನಿನ್ನ ಅಮ್ಮ ಮತ್ತು ಅಜ್ಜಿ ಸೇರಿ ಶಾಸ್ತ್ರ ಸಂಪ್ರದಾಯದಂತೆ ಬ್ರಾಹ್ಮಣರ ಬಳಿ ಕೇಳಿಸಿದರಾಯ್ತು ಅಂದು ಕೊಂಡು
ನಿನ್ನ ಹುಟ್ಟಿನ ಸಮಯ ದಿನಾಂಕ 12-09-2013 ನೇ ಗುರುವಾರ ಬೆಳಿಗ್ಗೆ 5-15 ವೃಚ್ಚಿಕ ರಾಶಿ, ಅನುರಾಧ ನಕ್ಷತ್ರ ವನ್ನು ತಿಳಿಸಿ ನಿನ್ನ ಜನ್ಮ ನಾಮದ ಬಲದಂತೆ ನಿನಗೆ ’ನಿಶ್ಚಲ್ ವ್ಹಿ ಬಾರ್ಕಿ’ ಎಂದು ನಾಮಕರಣ ಮಾಡಬೇಕೆಂದು ನಿನ್ನಮ್ಮನ ಆಸೆಯಾಗಿದೆ. ಹಿಗಾಗಿ ಅಜ್ಜಿ ನಿರ್ಮಲ ಹೊನ್ನಾಳಿಯ ಕೋಟೆಯಲ್ಲಿ ವಾಸವಾಗಿರೋ ಭೀಮಾ ಜ್ಯೋಯಿಸರ ಬಳಿ ಯಾವ ದಿನ ಒಳ್ಳೆಯದೆಂದು ಕೇಳಿಸಿಕೊಂಡು ಬರಲು ಹೋಗಿದ್ದರು. ಅದಕ್ಕೆ ಜ್ಯೋಯಿಸರು 2.02.2014 ನೇ ಭಾನುವಾರ ನಾಮಕರಣ ಮಾಡಲು ತುಂಬಾ ಪ್ರಶಸ್ಥವಾಗಿದೆ ಅಂದೇ ಮಾಡಿರೆಂದು ಹೇಳಿದಾಗ ಆ ಕ್ಷಣವೇ ನಿನ್ನಮ್ಮ ನನಗೆ ಫೊನ್ ಮಾಡಿ ತಿಳಿಸಿದರು.
ಅದಕ್ಕೀಂತ ಮೊದಲೇ ನಾನು ನಿನ್ನ ನಾಮಕರಣ ಮಾಡುವುದರ ಬಗ್ಗೆ ನಿನ್ನಮ್ಮನ ಬಳಿ ಸಾಕಷ್ಟು ಬಾರಿ ಚರ್ಚಿಸಿದ್ದೆ ನಾನಂತೂ ಮಾನಸಿಕವಾಗಿ ಸಿದ್ದನಾಗಿದ್ದೆ ಆದರೂ.......
ಏಲ್ಲಿ? ಹೇಗೆ? ನಾಮಕರಣ ಮಾಡಬೇಕು ಅಂತ ಯೊಚಿಸುತ್ತಿದ್ದೆ ಛತ್ರದಲ್ಲಿ ಮಾಡಬೇಕೆಂದು ನಾನೇ ನಿರ್ಧಾರ ಮಾಡಿದೆ ದಾವಣಗೆರೆಯ ವಿನೋಭನಗರ 1ನೇ ಮುಖ್ಯರಸ್ತೆಯಲ್ಲಿರುವ ’ಪಾರ್ವತಮ್ಮ ಶಿವಶಂಕರಪ್ಪ ಮಿನಿ ಛತ್ರ ’ದಲ್ಲಿ ನೆಡೆಸಬೇಕೆಂದು
ವಿಚಾರಿಸಲು ಹೋದರೆ ಅದಾಗಲೇ ಎಂಗೇಜ್ ಮೆಂಟ್ ಗೆಂದು ಬುಕ್ ಆಗಿತ್ತು.
ಅನ್ನಪೂರ್ಣೇಶ್ವರಿ ದೇವಸ್ಥಾನ ಛತ್ರ ಸಹ ಬುಕ್ ಆಗಿತ್ತು. ಹೊಗಲಿ ನರಹರಿ ಶೇಟ್ ಮಿನಿ ಛತ್ರದಲ್ಲಿ ಮಾಡಿದರಾಯ್ತು ಅಂತ ಕೇಳಲು ಹೋದೆ ಅಲ್ಲಿಯೂ ಸಹ ಯಾರದ್ದೋ ನಾಮಕರಣಕ್ಕೇಂದು ಬುಕ್ ಆಗಿತ್ತು. ಏನ್ಮಾಡೊದು? ಅಂತ ಯೊಚಿಸುತ್ತಲಿದ್ದೆ.
0 comments:
Post a Comment
Thank you so much